ಶುಕ್ರವಾರ, ಜುಲೈ 24, 2020

ಅಸೈನ್ಮೆಂಟ್ 10

ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಹಾಕಿಕೊಳ್ಳಬಹುದಾದ ಕಾರ್ಯತಂತ್ರಗಳು
1) ಮಕ್ಕಳ ಪಾಲಕರ ವಾಟ್ಸಪ್ ದೂರವಾಣಿ ಸಂಖ್ಯೆಯನ್ನು ಪಡೆದು ಶಾಲೆಯ ಗ್ರೂಪ್ ರಚಿಸಿ ನಿರಂತರ ಕಲಿಕಾ ಕಾರ್ಯ ಕೈಗೊಳ್ಳುವುದು.
2) ಓಣಿಯಲ್ಲಿರುವ ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಮಕ್ಕಳ ತಂಡ ರಚಿಸಿ, ಟ್ಯೂಶನ್ ವಿಧಾನದ ರೀತಿ ಕಲಿಕಾ ಪ್ರಕ್ರಿಯೆ ನಿರಂತರವಾಗಿರುವಂತೆ ನೋಡಿಕೊಳ್ಳುವುದು.
3) ವಾಟ್ಸಪ್ನಲ್ಲಿ ಪಠ್ಯಕ್ಕೆ ಸಂಬಂಧಿಸಿದ ಕಾರ್ಯ ಚಟುವಟಿಕೆಗಳನ್ನು ನೀಡಿ, ದಿನಂಪ್ರತಿ ಮಾಡಲು ತಿಳಿಸುವುದು. 
4) ಬರೆದ ವಿಷಯದ ಫೋಟೋವನ್ನು ಹಂಚಿಕೊಳ್ಳಲು ಪಾಲಕರಿಗೆ ತಿಳಿಸುವುದು.
5)ವಿಷಯಕ್ಕೆ ಪೂರಕವಾದ ವೀಡಿಯೋಗಳನ್ನು ಶೇರ್ ಮಾಡುವುದು, ಮಕ್ಕಳು ಅದನ್ನು ನೋಡಿದ್ದಾರೆಯೇ ಎಂದು ಖಾತ್ರಿ ಪಡಿಸಿಕೊಳ್ಳುವುದು.
6)ಮನೆ ಭೇಟಿ ನೀಡಿ ವೈರಸ್ ಕುರಿತಾಗಿ ಜಾಗ್ರತೆ ಮೂಡಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯತೆಯನ್ನು ತಿಳಿಸುವುದು, ಜೊತೆಗೆ ಸಹಪಾಠಿಗಳೊಂದಿಗೆ ವಿಷಯ ಹಂಚಿಕೆ ಮತ್ತು ವಿಷಯಕುರಿತಾಗಿ ಚರ್ಚಿಸಲು ತಿಳಿಸುವದು.
7) ಮನೆ ಭೇಟಿ ಸಂದರ್ಭದಲ್ಲಿ ಅಗತ್ಯ ಅಭ್ಯಾಸಗಳ ಕುರಿತಾಗಿ ಮಾಡಿದ ನೋಟ್ಸ್ ನೀಡಿ, ಅರ್ಥೈಸುವುದು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ